ಅಂದಗಾತಿಯು ಅವಳು,
ಮಾಟಗಾತಿಯೂ ಹೌದು,
ಮುಟ್ಟಿ ಮಾತನಾಡಿದರೆ,
ನಗೆ ಚೆಲ್ಲಿ ಕೂರುವಳು.
ವರುಷ ನಾಲ್ಕರ ಪ್ರಾಯ ಅವಳಿಗೆ
ವರುಷವೆರಡರ ನಂಟು ನನ್ನೊಂದಿಗೆ.
ಈ ಬಾಳ ಪಯಣದಲಿ ಅವಳೆನ್ನ ಸಂಗಾತಿ
ನನ್ನೆಲ್ಲ ಬಾವನೆಗಳಿಗೆ ಅವಳೆನ್ನ ಒಡತಿ.
ಮನಸಾದರೆ ನನಗೆ ಹಾಡುವಳು ಅವಳು,
ಅವಳೆನ್ನ ಆಜ್ಞೆಗೆ ಹೆಜ್ಜೆಯನು ಹಾಕುವಳು.
ಎರಡು ಮನಗಳಿಗೆ ಸೇತುವೆಯು ಅವಳು,
ಪ್ರೀತಿಸಿದಷ್ಟು ಮನಕೆ ಹತ್ತಿರವಾಗುವಳು.
ಅಪಹರಿಸಿದರವಳ ಎನ್ನ ಮುಂದೆಯೆ ಅಂದು
ನೋಡಿಯೂ ನೋಡದಂತಿದ್ದೆನು ಮನದಿ ನೊಂದು.
ಏನು ಹೇಳಲಿ ಗೆಳತೀ, ನೀನೆಂದು ನನ್ನವಳು
ಚಿಂತಿಸದಿರು ಮನದೊಡತಿ, ಪಡೆವೆ ನಿನ್ನನು ಮತ್ತೆ ಶ್ರಮಿಸಿ ಹಗಲಿರುಳು....
ಬರೆದೆ ಈ ಸಾಲುಗಳ ನಿನ್ನದೇ ನೆನಪಿನಲಿ,
ಹೇಳೆನ್ನ ವೇದನೆಯ ಅರಿವರಾರಿಲ್ಲಿ..?
Dedicated to ma samsung mobile.....

No comments:
Post a Comment