ದೇಶದಲ್ಲಿ
ನಡಿತಾ ಇರೋ ಅತ್ಯಾಚಾರಕ್ಕೆ ಕಾರಣ.:
- · ಮೊಡರ್ನೈಸೇಶನ್ ಹೆಸರಿನಲ್ಲಿ ಆಗುತ್ತಿರುವ ಬದಲಾವಣೆಗಳು.
- · ಶಿಕ್ಷಣದ ಹೆಸರಿನಲ್ಲಿ ಮನೆ ಬಿಟ್ಟು ಹೊರಗಿರುವ ಮಕ್ಕಳು.
- · ಉದ್ಯೋಗದ ನಿಮಿತ್ತ ಮಕ್ಕಳ ಆಗು ಹೋಗುಗಳ ಬಗ್ಗೆ ಗಮನ ಹರಿಸಿದ ಅಪ್ಪ ಅಮ್ಮಂದಿರು.
- · ಪ್ರತಿಷ್ಟೆಯ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಮರೆತ ಮನೆಯ ಹಿರಿಯರು.
- · ತಿದ್ದಿ ಪಾಠ ಹೇಳುವ ಶಿಕ್ಷಕರೇ ತಮ್ಮ ಕಾಯಕಕ್ಕೆ ಕಳ್ಳ ಬೀಳುತ್ತಿರುವುದು.
- · ಇತರರ ಹಂಗು ತೋರೆದು ಸ್ವತಂತ್ರವಾಗಿ ಬಾಳುತ್ತೇನೆ ಎಂಬ ಹುಂಬತನದ ಹೆಣ್ಣು.
- · ತಾನೇ ಹೆಚ್ಚು, ತಾನು ಬಯಸಿದ್ದೆಲ್ಲ ತನಗೆ ದಕ್ಕಲೇ ಬೇಕು ಎಂದು ಬಯಸುವ ಭಂಡ ಬುದ್ದಿಯ ಗಂಡು.
- · ಕೈಚೆಲ್ಲಿ ಕುಳಿತಿಹ ಸರಕಾರ.
- · ತನ್ನದಲ್ಲ ಎಂದು ತಿರುಗಿ ಕುಂತ ನೆರೆಹೊರೆಯವರು.
- · ಹದ ತಪ್ಪಿ ತೋರಿಸಿ ಹುಚ್ಚುಗೊಳಿಸುವ ಚಲನಚಿತ್ರಗಳು.
- · ತಮ್ಮ ಕರ್ತವ್ಯ ಮರೆತು ನಿಂತ ಸಮಾಜ.
ಒಟ್ಟಿನಲ್ಲಿ
ಹೇಳಬೇಕೆಂದರೆ ಸಮಾಜದ ಪ್ರತೀ ಮನುಜನು
ಇದಕ್ಕೆ ಕಾರಣನು. ಸಮಾಜಿಕ ಜಾಲ
ತಾಣದಲ್ಲಿ ಒಂದು ಇನ್ಸಿಡೆಂಟ್ ಹಿಡ್ಕೊಂಡು
ಗಂಡು ಹೆಣ್ಣಿನದೇ ತಪ್ಪು, ಹೆಣ್ಣು ಗಂಡಿನದೇ
ತಪ್ಪು ಎಂದು ಹೇಳಿಕೊಂಡರೆ, ಸಮಸ್ಯೆಗೆ
ಪರಿಹಾರ ದೊರಕುವುದಿಲ್ಲ. ಹಾಗೆಂದು ಬ್ಯಾನರ್ ಹಿಡಿದು
ರೋಡಿಗಿಳಿದರೂ ಸಮಸ್ಯೆ ಪರಿಹಾರವಾಗಲಾರದು. ದೇಶಮಟ್ಟದಲ್ಲಿ
ಪೋಲೀಸರು ಕಾಪಾಡುವುದು ಸಾಧ್ಯವಲ್ಲದ ಕೆಲಸ. ಜ್ಞಾನ ವೃದ್ದರ ಕರೆಸಿ ನಾಲ್ಕಾರು ಚಾನೆಲ್’ಗಳಲ್ಲಿ ಚರ್ಚಿಸಿದರು
ಉಪಯೋಗವಿಲ್ಲ.
ಇದಕ್ಕೆಲ್ಲ ಪರಿಹಾರ
ನನ್ನ ಯೋಚನೆಯ ಪ್ರಕಾರ ಹೀಗಿದೆ.:
ನಮ್ಮದೆಲ್ಲ ಕುದಿವ ರಕುತವಾಗಿರಬಹುದು. ಆದರೆ ಎಲ್ಲರಿಗೂ ಅವರವರದೇ ಆದ ಜೀವನವಿದೆ. ಕಾರಣ ಇಂದು ಬೀದಿಗಿಳಿದು ಬೆಂಬಲಿಸಿದ ಜನ ನಾಳೆಯೂ ನಮ್ಮೊಂದಿಗೆ ಇರುತ್ತಾರೆ/ ಇರಬೇಕು ಎಂದುಕೊಳ್ಳುವುದು ಸಾಧ್ಯವಿಲ್ಲ. ಇರಬೇಕು ಅಂದುಕೊಳ್ಳುವುದು ತಪ್ಪು ಕೂಡ. ಅಕಸ್ಮಾತ್ ಇರಬೇಕು ಎಂದುಕೊಂಡಲ್ಲಿ, ನಾವು ಎಷ್ಟರ ಮಟ್ಟಕ್ಕೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂಬುದು ಪರಿಗಣನೆಗೆ ತೆಗೆದುಕೊಳ್ಳಬೇಕಾದದ್ದೂ ಅನಿವಾರ್ಯವೇ ಸರಿ. ಇದೆಲ್ಲವ ಬಿಟ್ಟು ತಮ್ಮ ತಮ್ಮ ಮನೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ. ಇತರರಿಹೇಳುವ ಮೊದಲು ನಾವು ನಮ್ಮ ಕರ್ತವ್ಯವನ್ನು ಮಾಡೋಣ. ನಮ್ಮ ಮನೆಯ ಮಗ/ ಮಗಳು ಹಾದಿ ತಪ್ಪದಂತೆ ಎಚ್ಚರವಹಿಸೋಣ. ಸಮಾಜದಲ್ಲಿ ಇಂತಹ ಕುಕೃತ್ಯಗಳು ಕಡಿಮೆಯಾಗಬೇಕೆಂದಿದ್ದರೆ ಮನೆಯ ಮಗಳು ಹೊರ ನಡೆವ ಸಮಯದಲ್ಲಿ , ಸಮಾಜದಲ್ಲಿ ಯಾವ ರೀತಿ ತನ್ನನ್ನು ತಾನು ತೋರ್ಪಡಿಸಿಕ್ಕೊಳ್ಳುವುದು ಉತ್ತಮ ಎಂದು ತಿಳಿಹೇಳಬೇಕು. ಮಗನ ಚಲನವಲನದ ಮೇಲೆ ಗಮನ ಇರಲಿ. ಶಾಲಾ ಕಾಲೇಜಿನಲ್ಲಿ ಇತರರನ್ನು ಅನುಸರಿಸುವ ಸಂದರ್ಭದಲ್ಲಿ ತಾನು ಹಾದಿ ತಪ್ಪುತ್ತಿದ್ದೇನೆಯೇ ಎಂಬುದರ ಅರಿವು ತನಗೆ ಬಾರದೇ ಇದ್ದಲ್ಲಿ ಇಂತಹದೆಲ್ಲ ಆಗುವುದು ಸಹಜ. ಆದರ್ಶಗಳನ್ನು ಪಾಲಿಸೋಣ, ಆತುರಕ್ಕೆ ಆಡಂಬರದ ಜೀವನ ಬೇಡ. ಹಣವಿದೆ ಎಂದು ಮಕ್ಕಳಿಗೆ ಶ್ರೀಮಂತ ಜೀವನ ಒದಗಿಸದಿರಿ. ಮಕ್ಕಳಿಗಾಗಿ ದುಡಿದದ್ದು ಅವರೂ ಅನುಭವಿಸದಿರೆ ಎಂದೆನಿಸಬಹುದು. ಆದರೆ ಇಂದಿನ ಜನಾಂಗ ಹಾದಿ ತಪ್ಪಲು ಇದೂ ಒಂದು ಕಾರಣ. ಮಕ್ಕಳಿಗೆ ಸ್ವತಂತ್ರದ ಜೊತೆಗೆ ಸ್ವಲ್ಪ ಜವಾಬ್ದಾರಿಯನ್ನೂ ವಹಿಸಿ. ಆಗಲೇ ಅವರು ಅವರವರ ಕರ್ತವ್ಯವನ್ನು ಅರಿಯಬಲ್ಲರು. ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಅರಿಯಬಲ್ಲರು.
ಮೊದಲು ನಾವು ಒಳ್ಳೆಯವರಾಗೋಣ. ನಾವು ಸರಿಯಾಗಿದ್ದರೆ, ನಮ್ಮವರೂ, ನಮ್ಮ ಊರು, ನಮ್ಮ ರಾಜ್ಯ ಹೀಗೇ ಇಡೀ ದೇಶ ಒಳ್ಳೆಯ ನಡತೆ ಕಲಿತು ಸಮಾಜ ಸುಂದರಗೊಳ್ಳುವುದರಲ್ಲಿ ಸಂಶಯವಿಲ್ಲ.
!!!...ಬದಲಾವಣೆ
ನಮ್ಮಿಂದಲೇ ಆಗಲಿ..!!!

No comments:
Post a Comment