Sunday, May 11, 2014

ನನ್ನ ಪ್ರೀತಿಯ ನಾನು...

 ಮೊದಲು ನನ್ನನ್ನು ನಾನು ಪ್ರೀತಿಸಬೇಕು, ಗೌರವಿಸಬೇಕು, ಅನುಸರಿಸಬೇಕು...... ನನ್ನ ಮೇಲೆ ನನಗೇ ಅಭಿಮಾನ ಇಲ್ಲದ್ದಿದ್ದರೆ ಇತರರು ಹೇಗೆ ಅಭಿಮಾನ ಇಟ್ಟಾರು? ನಿಜ ಹೇಳ್ಬೇಕು ಅಂದ್ರೆ, ಈ ಜಗತ್ತಿನಲ್ಲಿ ನನ್ನ ಅತೀ ಹತ್ತಿರದ ಬಂಧುಮಿತ್ರ ನಾನು.. ನಾನು ನನಗೆ ಎಂದೂ ಕೇಡು ಬಯಸಿಲ್ಲ. ಇಬ್ಬಗೆಯ ನೀತಿ ಇಲ್ಲ. ನನಗೆ ಏನೇ ಅನ್ನಿಸಿದರೂ ಮೊದಲು ನನ್ನಲ್ಲಿ ಹೇಳ್ಕೋತೀನಿ. ಸರಿ ತಪ್ಪಿನ ಅರಿವು ಮೊದಲು ನನಗೆ ಇರಬೇಕು. ಮನುಷ್ಯ ಸಂಘಜೀವಿ ನಿಜ. ಆದರೆ ವೈಯಕ್ತಿಕ ವಿಚಾರ ಬಂದಾಗ ನನ್ನೊಲುಮೆ ನನ್ನ ಮೇಲೇ ಜಾಸ್ತಿ.

No comments: