ಮಿಂದ ಹಸಿ ಮೈಯಲ್ಲಿ ಒದ್ದೆ
ಅರಿವೆ ಸುತ್ತಿದ ಅವಳು ತಲೆಯ
ಒರೆಸುತ್ತಾ ವಾರೆ ನೋಟವ ಬಿತ್ತಿ
ಒಳ ನಡೆದಿದ್ದಳು. ನನ್ನ ಕಣ್ಣುಗಳು ಅವಳ
ಬೆನ್ನತ್ತಿ ಓಡಿದ್ದವು. ತವಕವ ತಡೆಯದ ಮನವು
ಕದ ತಟ್ಟಿ ಅವಳ ಕೆಣಕಿತ್ತು.
ಹದ ತಪ್ಪಿದ ಎನ್ನ ಅವಸರವರಿತ
ಅವಳು ಕದ ತೆರೆದರೂ ಎದಗವುಚಲು
ಇದಿರಾದ ಎನ್ನ ಮೊಣ ದೂರದಲ್ಲಿ
ಕಣ್ನೋಟದಲ್ಲೇ ತಡೆದು ನಿಲ್ಲಿಸಿದ್ದಳು. ಈ
ಹೆಣ್ಣಿನ ಶಕ್ತಿಯೇ ಅದು. ಬೇಡವೆನಿಸಿದರೆ
ನೋಟದ ಆಯುಧವೇ ಸಾಕು. ಗಂಡು
ತಾ ಸೋತು ಮೂಲೆ ಸೇರುವುದು
ಖಚಿತ.
ಆದರೂ ತಡೆಯಲೊಲ್ಲದೇ ಅಡುಗೆ ಮನೆಯ ಕದ
ಸಂಧಿಯಿಂದಲೇ ಅರೆಗಣ್ಣ ಒಳಗಿಟ್ಟು ಅವಳ
ಬಂಧಿಸಿದ್ದೆ. ಆಕೆ ಏನೋ ಅಡುಗೆ
ಕೆಲಸದಲ್ಲಿ ಮಗ್ನಳಾಗಿದ್ದಳು. ಬೆಕ್ಕಿನ ನಡಿಗೆ ಅದೆಂದು
ಕಲಿತಿದ್ದೆನೋ.... ನನಗೇ ಅರಿವಾಗದೆ ಹಿಂಬದಿಯಿಂದಲೇ
ನಡು ಬಳಸಿ ತಬ್ಬಿ ಹಿಡಿದಿದ್ದೆ.
ನಿಶ್ಶಬ್ಧದ ಮಡಿಲಲ್ಲಿ ಬಿಸಿಯುಸಿರು, ಎದೆ ಬಡಿತವೆರಡೂ ಪೈಪೋಟಿಗಿಳಿದಿದ್ದವು.
ಕಣ್ಮುಚ್ಚಿ ಆಕೆಯೂ ತನ್ನನ್ನೇ ಎನಗರ್ಪಿಸಿದ್ದಳು....
ಕೊನೆಯಲ್ಲಿ
ಕೊಸರಾಡಿದ ಅನುಭವ.... ದ್ದೋಪ್ಪೆಂಬ ಶಬ್ಧ.... ಬೆವರಿಳಿಯುತ್ತಿತ್ತು.... ಕಣ್ಣು ಕಟ್ಟಿತ್ತು... ಆಸೆಗಳು
ಉತ್ತುಂಗದಲ್ಲಿದ್ದವು.... ಕತ್ತಲು ಕಿರಿಕಿರಿಯೆನಿಸಿತು..... ಏನಾಯಿತೆಂದು ಅವಲೋಕಿಸುತ್ತ
ಅತ್ತಿತ್ತ ಕಣ್ಣಿಟ್ಟೆ.... ನಾನು ಮಂಚದ ಕೆಳಗಿದ್ದೆ...
ಮತ್ತೆ ಎದ್ದು ಹೊದಿಕೆ ಎಳೆದು
ಮಲಗಿದೆ...ಮತ್ತೇರಿ ಮತ್ತೆ ಬೀಳುವ
ತವಕದಲ್ಲಿ.....

No comments:
Post a Comment