ಕಿರುಬೆರಳುಗಳು
ಸೇರಿ ಬೆಸೆದ ಈ ಜೀವಗಳು,
ಜೀವನದ ಸಾಗರದಲಿ ತುಸು ದೂರ
ಸಾಗಿವೆ ಕೇಳು.
ಸುತ್ತಮುತ್ತಲಿನ
ಜಗಕೆ ಆದರ್ಶವೆನಿಸಿಹರಿವರು,
ಹೊಸ ಜೀವ ಸಂಕುಲಕೆ ನಾಂದಿ
ಹಾಡಿಹರು.
ಸಪ್ತಪದಿ
ತುಳಿಯುವ ಮುನ್ನ, ಅವನಾರೋ..... ಇವಳಾರೋ...!!!
ಕಂಡಿಲ್ಲ.
ಮಾತನಾಡಿಲ್ಲ. ಕೊನೆಪಕ್ಷ ಮುಖಪುಟದಲ್ಲಿ ಯಾರದೋ ಮುಖದ ಹಿಂದೆ
ಕೂತು ಸಂದೇಶಗಳನ್ನೂ ಕಳಿಸಿಕೊಂಡಿಲ್ಲ...!!!
ಹಿರಿಯರ
ಒತ್ತಾಯವೇನಲ್ಲ. ಸ್ನೇಹಿತರ ಸಲಹೆಯೂ ಅಲ್ಲ. ಮೂರನೆಯವರ
ಭಯವಂತೂ ಇಲ್ಲವೇ ಇಲ್ಲ.
ಮನದಲ್ಲೇ
ಅರಳಿದ ತಾವರೆಗೆ ಇಬ್ಬರೂ ಸಲಿಲವಾಗಿಹರು.
ಹಿರಿಯರ
ಅಶೀರ್ವಾದವೇ ಇವರಿಗೆ ರಕ್ಷಾಕವಚವು.
ಬಂಧುಗಳ ಶುಭಹಾರೈಕೆ ತಲೆಗಿಟ್ಟ ಮಂತ್ರಾಕ್ಷತೆಯು.
ಕೊಟ್ಟ ಉಡುಗೋರೆ………
ಆತ್ಮಾಭಿಮಾನಕ್ಕೋ, ಕೊಟ್ಟವರ ಹೆಗ್ಗಳಿಕೆಗೋ… ನಾ ಅರಿಯೆ…
ಕೀರುತಿಗೊಂದು ಮಗುವ
ಹೆತ್ತು ಸುಖ ಕ್ಷಣಗಳ ಹೊತ್ತು
ಅವರದೇ ಜಗದಲ್ಲಿ
ವಿಹರಿಸುತಿಹರು…. ಬೆಳೆವಾಗ ಬೆಂಬಲಿಸಿದವರ ಸಂಬಂಧಗಳ ಮರೆತು…!!!

1 comment:
Very nice (Y) :D
Post a Comment