ನಂಬಿಕೆ ಎನ್ನೊದು ಹುಟ್ಟಿನೊಂದಿಗೆ
ಬಂದದ್ದಲ್ಲ. ನಮ್ಮೋರು ಅಂತಾ ಯಾರು
ನಮ್ಮನ್ನು ನಂಬೊಲ್ಲ. ನಮ್ಮ ನಡವಳಿಕೆ ಮತ್ತು ಆದರ್ಶಗಳ
ಆಚರಣೆಯಿಂದ ನಂಬಿಕೆ ಅನ್ನೊದು ಬೆಳೆಯುತ್ತೆ.
ಇನ್ನೊಬ್ಬರಿಗೆ ನಮ್ಮ ಮೇಲೆ ನಂಬಿಕೆ
ಇರೋದರ ಜೊತೆಗೆ, ನಮ್ಮ ಮೇಲೆ
ನಮಗೆ ನಂಬಿಕೆ ಇರೋದು ಮುಖ್ಯ.
ನಮ್ಮನ್ನು ನಂಬಿದವರ ನಂಬಿಕೆಯನ್ನು ಉಳಿಸಿಕೊಳ್ಳೊದು
ನಮ್ಮೆಲ್ಲರ ಆದ್ಯ ಕರ್ಥವ್ಯವಾಗಿರುತ್ತದೆ. ನಂಬಿಕೆ
ಅನ್ನೋದು ಪ್ರತಿಯೊಬ್ಬನ ವ್ಯಕ್ತಿತ್ವ ಮತ್ತು ಗುಣಮಟ್ಟಕ್ಕೆ ಸಂಬಂಧಿತವಾಗಿದ್ದು, ಅದು ಯಾವುದೇ ವ್ಯಕ್ತಿಯಲ್ಲಾಗಿರಬಹುದು
ಅಥವಾ ವಸ್ತುವಿನಲ್ಲಾಗಿರಬಹುದು. ವ್ಯಕ್ತಿ/ವಸ್ತು ವನ್ನು ನಾವು ಅದೆಷ್ಟು ಪ್ರೀತಿಸುತ್ತೇವೆಯೋ ಅಷ್ಟು
ಅವನು/ ಅದು ನಂಬಿಕೆಗೆ ಅರ್ಹವಾಗುತ್ತಾನೆ/ ತ್ತದೆ. ಪ್ರೀತಿ ಇದ್ದಲ್ಲಿ ನಂಬಿಕೆ ಸಹ ಇರುತ್ತದೆ. ನಂಬಿಕೆ
ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರೀತಿಯ ಅಸ್ತಿತ್ವ ಇದೆ ಎಂದಾದಲ್ಲಿ ಅಲ್ಲಿ
ನಂಬಿಕೆಯೂ ತಳವೂರಿದೆ ಎನ್ನುವುದು ನಿಸ್ಸಂದೇಹ.
No comments:
Post a Comment